ಆಮಿಯನ್ಸ್ ಒಪ್ಪಂದ-
ನೆಪೋಲಿಯನ್ನನ ಮಹಾದಂಡಯಾತ್ರೆಯ ಮಧ್ಯದಲ್ಲಿನ ಒಂದು ಶಾಂತಿ ಒಪ್ಪಂದ. ಬ್ರಿಟನ್ನಿಗೂ ಫ್ರಾನ್ಸಿಗೂ ನಡುವೆ 1802ರ ಮಾರ್ಚ್ 27ರಂದು ಉತ್ತರ ಫ್ರಾನ್ಸಿನ ಆಮಿಯನ್ಸ್ ನಗರದಲ್ಲಿ ನಡೆಯಿತು. ಇದರ ಪ್ರಕಾರ ಫ್ರೆಂಚರಿಗೆ ಅವನ ವಸಾಹತುಗಳೆಲ್ಲ ದಕ್ಕಿದವು. ಬ್ರಿಟನ್ ಮಾತ್ರ ಸಿಲೋನ್ ಮತ್ತು ಟ್ರಿನಿಡ್ಯಾಡ್‍ಗಳನ್ನು ಇಟ್ಟುಕೊಂಡು ಉಳಿದಂತೆ ಸ್ಪೇನಿಗೆ ಮೈನಾರ್ಕವನ್ನೂ, ಹಾಲೆಂಡಿಗೆ ಕೊಚಿನ್, ಕೇಪ್ ಆಫ್ ಗುಡ್‍ಹೋಪ್ ಸ್ಪೈನ್ ದ್ವೀಪಗಳನ್ನೂ ಬಿಟ್ಟು ಕೊಟ್ಟಿತು. ಈ ಒಪ್ಪಂದದಿಂದ ತಾತ್ಕಾಲಿಕವಾಗಿ ಮಾತ್ರ ಯೂರೋಪಿನಲ್ಲಿ ಶಾಂತಿ ನೆಲೆಸಿತು. ಏಕೆಂದರೆ 1803ರಲ್ಲಿ ಮತ್ತೆ ಇಂಗ್ಲೆಂಡ್ ನೆಪೋಲಿಯನ್ನನ ಮೇಲೆ ಯುದ್ಧ ಘೋಷಿಸಿತು.
(ನೋಡಿ- ನೆಪೋಲಿಯನ್-1)							
	(ಜಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ